Featured Post

ಕವನ ಸಂಕಲನ

Friday, April 4, 2014

ಕವನ ಸಂಕಲನ

Imaginary Girl - ಕಲ್ಪನೆಯ ಬೆಡಗಿ

ನನ್ನ ಕಲ್ಪನೆಯ ಬೆಡಗಿ ...... ಮನಸಲ್ಲಿ ಮನೆ ಮಾಡಿದಳು.. ಒಮ್ಮೆ ಹೇಳಿಬಿಡು ಹುಡುಗಿ, ನಿನ್ನಂದವ ವರ್ಣಿಸುತ ಕವಿಯಾಗಲ... ಇಲ್ಲ ನಿನ್ನಂದವ ನಾ ನೋಡುತಾ ಸುಮ್ಮನೆ ಕುಳಿತಿರಲಾ?...ನಿನ್ನ ಕೈಹಿಡಿದು ಜೊತೆ ಸಾಗುವಾಸೆ , ಮನ ಬಿಚ್ಚಿ ಮಾತಾಡಿಬಿಡು ಸಖಿ... ಕಟ್ಟಾಕಿರುವೆ /ಬಂದಿಯಾಗಿರುವೆ {ನನ್ನ]ನಿನ್ನ ನಗುವಿನಲ್ಲಿ.. ಅಪ್ಪಿಬಿಡಲೇ ನ ನಿನ್ನಒಮ್ಮೆ.... ಒಮ್ಮೆ ಹೇಳಿಬಿಡು ಹುಡುಗಿ.... ನನ್ನ ಕಲ್ಪನೆಯ ಬೆಡಗಿ... 

- ದೇವಯ್ಯ



 



ಸಂಜೆಯ ರಾಗಕೆ ಬಾನು ಕೆಂಪೇರಿದೆ..ನನ್ನನೇ ಮರೆತಂತಾಗಿದೆ ತಂಪು ಗಾಳಿ  ಬೀಸಿದೆ ಮನಸು ನೆಮ್ಮದಿ ಬಯಸಿದೆ  😊
  - ದೇವಯ್ಯ

ನಿನೊಡನೆ ಒಂದು ಕಪ್ ಚಾ ಕುಡಿಯುವ ಬಯಕೆ , ಒಂದೇ ತಟ್ಟೆಯಲ್ಲಿ ರೋಟಿ ಚಿಲ್ಲಿಪೋರ್ಕ್ ತಿನ್ನುತಾ ಪೀಸ್ ಗಾಗಿ ಕಿತಾಡುತಾ ಸಮಯ ಕಳಿಯುವ ಹಂಬಲ , ಒಂದ್ ಎರಡು ಪೆಗ್ ಹೊಡೆಯುತ ಸ್ಟೆಪ್ ಹಾಕುವ ಇಚೆ ....
ಕಡಲಿನ ತೀರದಲ್ಲಿ ಕುಳಿತು , ಅಲೆಗಳ ಕಲರವ ಸವಿಯುವ ಆಸೆ.....  - ದೇವಯ್ಯ

ಕವನಗಳನ್ನು ಗೀಚುವ ಹುಚ್ಚು ನನಗೆ, ಎಷ್ಟು ಸರಿಯೋ ತಪೋ ತಿಳಿಯದೆ ಗೀಚುತಲಿರುವೆ , ಈ ಕವನಗಳಿಗೆ ನೀನೇ ಸ್ಪೂರ್ತಿ... ನಮ್ಮ ಮನೆಯ ರಾಣಿ ನೀನು, ಕಾದು ಕುಳಿತಿರುವೆವು ನಾವು .
ಕಲ್ಪನೆಗೆ ಜೀವ ತುಂಬುವ ಹಂಬಲ .....
ಹೋತು ಮುಳುಗುವ ಸಮಯಕೆ ಕಾಯುತಲಿರುವೆ . ನಿನ್ನನು ಭೇಟಿಯಾಗಲು ಕಾದು ಕುಳಿತಿರುವೆ .
ಗೊತಿಲದೆ ಮೂಡಿದೆ ಖುಷಿ ಮನದಲ್ಲಿ , ಮುಗುಳ್ನಗೆ ಮೊಗದಲ್ಲಿ ...
ಏನೇನೋ ಚಿರಿ ಹೇಳುವ ತವಕ ತುಟಿಯ ತುದಿಯಲಿ .
ಈ ಸಣ್ಣ ಕವನ ಗೀಚಿ ಒಂದು ಪ್ರಯತ್ನವ ಮಾಡಿರುವೆ  ನಿನ್ನಯ ದಣಿವು ನೀಗಿಸಲು,  ಮೊಗದಲ್ಲಿ ಮಂದಹಾಸ ಮೂಡಿಸಲು ..  - ದೇವಯ್ಯ



ನನ್ನ ಚೆಲುವೆಯ (ಮಡದಿಯ) 💑 ಜನ್ಮದಿನ ಇಂದು( ಜಾನ್ ೦೧) , ಮೂಡಿಸು ಅವಳ ಮೊಗದಲ್ಲಿ ಸಂತೋಷದ ಮಂದಹಾಸ ☺😊....
ಪ್ರೀತಿಯ ಚಿಗುರು ಮರವಾಗಿ 🌲 ಬೆಳೆದಿದೆ , ಬಾಡದಿರಲಿ ನಿನ್ನ ಹೂವಿನಂತ 🌹 ಮನಸು , ಇರಲ್ಲಿ ಹರುಷ ನಮಯ ಬಾಳಲ್ಲಿ ಜೀವನದುದ್ದಕೂ..... ನಿನ್ನ ಪ್ರೀತಿಗೆ ನಾನು ಸೋತಿರುವೆ, ನನನ್ನು ಹಿಡಿದಪಿರುವೆ..., ಪ್ರೇಮವೇ ಕಾಯುತಲಿರುವೆ ನಿನಗಾಗಿ..!!
ನನ್ನ ಬಳಿಯಲೇ ಇದು ಇಲದಂತಾಗಿದೆ..ನಿನ್ನಯ ನಗು ನನನ್ನು ಬಂಧಿಸಿದೆ , ಬೇರೆ ಪ್ರಪಂಚವನ್ನು ಮರೆಸಿದೆ ....;) 
ಎಲ್ಲಿಯೋ ಬೆಳೆದ ಈ ಎರೆಡು ಜೀವಗಳು 💑 ಒಂದಾಗಿ ಬಾಳುವ ಸಮಯ ಇದಾಗಿದೆ, ಕನಸುಗಳಿಗೆ ಜೀವ ಬಂದಾಗಿದೆ...
ದಾಂಪತ್ಯದ ಮರದಲ್ಲಿ ಸಿಹಿಯಾದ ಹಣ್ಣುಗಳೊಂದೇ ಕಡಿಮೆ ಎನಿಸಿದೆ ....💖💕 

           😘 ನನ್ನ ಮಡದಿಗೆ ಜನ್ಮದಿನದ  ಶುಭ ಹಾರೈಕೆ....🌹 💓 💗             - ದೇವಯ್ಯ


ನನ್ನ ಪ್ರಯತ್ನ ಮಾಡುವೆ ಸದಾ ನೀನಾ ಮನವ ಅರಿಯಲು, ನೀನು ಹಾಡದ ಮಾತು ತಿಳಿಯಲು.

ನಿನ್ನ ಮನಸು ಓದಲು ಕೇಳುವೋಮೇ ನಾನು ಸೋತರು ಸಧಾ ಪ್ರಯತ್ನವು ಮಾಡುತಲಿರುವೆ ನಿನ್ನಯ ಭಾವನೆ ತಿಳಿಯಲು. ಸಧಾ ನಿನೊಡನೆ ಇರುವ ಹಂಬಲ ನನ್ನದು. ಪ್ರಾಣಸಕಿ ನಿನ್ನಯ ಸುಖದುಃಖಗಳ ಪಾಲು ನನಗಿರಲಿ. 💕   - ದೇವಯ್ಯ

ನಿನ್ನ ಮಗುವಿನಂತ 👶 ತುಂಟಾಟ 😛 ನನನ್ನು ಮರೆಸಿದೆ , ನಿನ್ನಯ ಸಿಟು, ಕೂಗಾಟ ಬೆಚ್ಚಿಬೀಳಿಸಿದೆ ... ಹೃದಯ 💓 ಬಡಿತ ನಿಲುವಂತೆ ಮಾಡಿದೆ , ನಿನ್ನ ಮುಗ್ದತೆ , ಕೆಂಡದಂತಾ ಕೋಪ ಈ ಮಿಶ್ರಣ ನನಯ ಹರುಷಕೆ ಕಾರಣ. ಅತ್ತು 😭 ಮರುಕ್ಷಣ ನಗುವ 😄 ಪುಟ್ಟ ಕಂದಮನಂತೆ ನೀನು, ಎಲವೂ ಹೊಸತು ನನಗೆ.... ಬಂದವಳೇ ಮೃಷ್ಟಾನ್ನ ಭೋಜನದಂತೆ, ಸಿಹಿ ಕಹಿ ಮಿಶ್ರೀತ ಬದುಕಿನ ಸೂಚನೆಯೇ ಎಂಬಂತೆ ...!!!!
 ಮನಸ್ಸನ್ನು ಕದ್ದವಳೇ 💑 ಹೃದಯದಲ್ಲಿ ಮನೆ 🏡 ಮಾಡಿ , ಬಳಿಯೇ ಇದು ಇಲ್ಲದಂತೆ , ಕಣ್ಣು ತುಂಬಿದೆ ನಿನ್ನೊಡನೆ ಕಳೆದ ಮದುರ ಕ್ಷಣ. ಚಿತ್ರಗಳು  ಸಾಲಾಗಿ ನಿಂತಿವೆ ಕಣ್ಣ ಮುಂದೆ ನಮಯ ಮುಂಬರುವ ಆ ದಿನಗಳು , ಎರಡು ಕುಟುಂಬಗಳು ಒಂದಾಗುವ ಸಮಯ ⏰ ;೦)    ......  - ದೇವಯ್ಯ - ಮ್ಯಾಗಿ 

ನಿನಗೆ  ಸದಾ ಹಕ್ಕಿಯಂತೆ ಬಾನಲ್ಲಿ ಹಾರುವ ಬಯಕೆ ......ರೆಕ್ಕೆ ಬಿಚ್ಚಿ ಹಾರುತ ನಿನ್ನನು  ಮರೆಯುವ ಆಸೆ ..!! ಮೋಡದಂತೆ (ಮೇಘ ) ನೀನು, ನಿನ್ನನು ಹಿಡಿಯಲು ಸಾಧ್ಯವೇ .....? ನಿನ್ನನು ಕಾಣದೇ ನನ್ನ ಕಣ್ಣುಗಳು ಬರಡಾಗಿದೆ.......
ಮೇಘಕೆ (ಮೋಡಗಳಿಗೆ) ಕಾದು ಕುಳಿತಿರುವ ರೈತನಂತೆ ನಾನು , ಬಯಸುವೆ ಸದಾ ನಿನ್ನನು ನನ್ನೊಂದಿಗೆ

, ಸುರಿಸು ಪ್ರೀತಿಯ ಮಳೆಯ  ನನ್ನ ಈ ಬರಡು  ಹೃದಯದ ಭೂಮಿಗೆ ......... - ದೇವಯ್ಯ


ಮುರಿದ ಬಳ್ಳಪದಿಂದ ಹೊಡೆದ ಹೃದಯದ ನಡುವೆ ಕಂಡಿರುವೆವು  ನೋವು ಸುಖದ ಸಮಯ , ತಿರುಗಿ ನೋಡಿ ನೆನೆದರೆ ಆ ಗಳಿಗೆಯ ಕಣುಗಳು ತುಂಬುವುದು , ಮೊಗದಲ್ಲಿ ಮುಗುಳ್ನಗೆ ಬಿರುವುದು .....!!!
ಶಯನದ ನಡುವೆ ಕಂಡ ಕನಸಂತೆ ಜೀವನ ಹುರುಳಿದೆ , ಈ ಕ್ಷಣವೂ ನಿದೆ ಇಂದ ಎದಿರುವಂತೆ ಒಂದು ಭಾವನೆ ...
ಸಂತೋಷ , ಪ್ರೀತಿಯ ಸಾಲುಗಳ ನಡುವೆ ಸುಖ ದುಃಖದ ಪದಗಳ ಹುಡುಕಾಟದ ನಡುವೆ ಜೀವನ ಮುಂದುವರೆದಿದೆ.!! ;೦)
                                                                                                                               - ದೇವಯ್ಯ

ಓ ನಲ್ಲೆ 👰 ಅಡಗಿಸಿರುವೆ ಸಾವಿರ ನೋವುಗಳ ನಿನ್ನಲ್ಲಿ, ಮರೆಮಾಚಿರುವೆ ನಿನ್ನಯ ನಗುವಿನಲ್ಲಿ , ಕೊರಗುತಲಿರುವೆ ಓಬಳೇ ಯಾರಿಗೂ ಕಾಣದೆ . ಹಂಬಲಿಸುತಿರುವೆ ನಿನ್ನವರ ಅಪುಗೆಗಾಗಿ, ಮನಸು ಬಿಚ್ಚಿಡುವ ಧೈರ್ಯ ಮಾಡಲು ಹಿಂಜರಿಯುತಲಿರುವೆ . ನಿನ್ನಯ ಈ ದುಗುಡವ ದೂರ ಮಾಡುವ ಸಮಯ ಬಂದಾಗಿದೆ , ಅಪ್ಪಿಬಿಡು ಒಮ್ಮೆ ನನ್ನನು 
ಕಣ್ಣೀರಾಗಿ ಹೊರ ಚೆಲ್ಲು  ನಿನ್ನಯ  ಆ ಕಹಿ ಗಳಿಗೆಯನು . ನಿದ್ರಿಸು ನನ್ನೆಯ ತೋಳುಗಳಲ್ಲಿ ನಿನ್ನನು ಮರೆತು, ಇರುವೆ ನೀನೊಡನೆ ಇಂದು ಎಂದೆಂದು 👫 💕......   - ದೇವಯ್ಯ

ನಿನ್ನಯ ಮೊಗದ ಕಾಂತಿ ಹೆಚ್ಚಿಸುತಲಿದೆ ನನ್ನಯ ಹೃದಯದ ಬಡಿತ....
ನನ್ನಯ ನೋಟ ನಿನ್ನಯ ಹಂದವನ್ನು ಸವಿಯಲು, ಗಮನವು ಬರದ್ದು ಇನ್ನೆಲ್ಲೂ .
ನಿನ್ನಯ ಚಂದವು ಬಂಧಿಸಲು ನನ್ನನು , ಸದಾ ನಿನನ್ನು ನೋಡಿತ್ತಿರುವ ಹಂಬಲ ನನ್ನದಾಗಿದೆ .
ನಿನ್ನಯ ನಗುವು ಮರಿಯುವಂತೆ ಮಾಡಿದೆ ನನ್ನಯ ನೋವ , ದೂರವಾದಂತಿದೆ ಜೀವನದ ಒತ್ತಡ.....!!
 - ದೇವಯ್ಯ


ಪ್ರೀತಿಯ ಕುರಿತು ಮನಸು ಸಲಹೆ ಕೊಡಲು ಮುಂದಾಗಲು , ಹೃದಯವು ಪ್ರತಿಯಾಗಿ, ಸಮಯವೂ ಮುಂದೆ ಹೋಗಿದೆ , ನಿನ್ನಯ ಸಲಹೆ ತಡವಾಯಿತೇ ಎನ್ನಲು , ಕಣ್ಣು ತನ್ನದೇ ಭಂಗಿಯಲ್ಲಿ ಸಮಜಾಯಿಷಿ ನೀಡಿತ್ತು(ಕಣೀರು )......  - ದೇವಯ್ಯ

ಅವಳು ನನ್ನವಳಾಗಿದಳು, ಎಲ್ಲಿಯವರೆಗೆ!! ನಾನ್ನು ನಿದೆಯಿಂದ ಎಳುವವರೆಗೆ.
ಅವಳು ಸಮಯವಿದಂತೆ, ನನ್ನಗೆ ತಿಳಿದಿದೆ ಕಳೆದು ಹೋದ ಸಮಯ ಮರಳಿ ಬಾರದೆಂದು !!!!.....  - ದೇವಯ್ಯ

ಆಕೆಯ ನೋಡುತ ಕೇಳಿದ ಹೇ ಬೆಡಗಿ ಆಗುವೆಯ ನನ್ನ ಬಾಳ ಸಂಗಾತಿ, ಇರುವೆ ನಿನ್ನ ಜೊತೆ
 (ನೀನೊಡನೆ) ನಿನ್ನ ಈ ಪ್ರಾಯದಿಂದ ನಿನ್ನ ಮುಪಿನ ಸುಕಿನವರೆಗೆ…ಬಾ ನನ್ನನು ಸ್ವೀಕರಿಸು ನನ್ನಯ ಪ್ರಾಣಸಕಿ..
                                                                                                                           - ದೇವಯ್ಯ 

ಅಂಗಳದಲ್ಲಿ ಮಳೆಯ⛈ ಆರ್ಭಟ,ಸೋಕಿದೆ ಮಳೆಯ ಹನಿ☔ ನನ್ನ ಮೈಯ , ಕೈಯಲ್ಲಿ ಹಿಡಿದಿರುವೆ ಅರ್ಧ ಪೆಗ್ಗ 🍸 ......
ಮನದಲ್ಲಿ💭 ಏನೋ ಒಂದು ವಿಚಾರ , ಪ್ರಕೃತಿಯ🌍 ಉತ್ತರವೇನೋ ಎಂಬ ಕಳವಳ , ಪ್ರಕೃತಿಯು ವಿವರಿಸುತಲಿದೆ ನಮ್ಮಯ ಸಾವಿರ ತಪ್ಪುಗಳ ಭಂಡಾರ .........
ಕೂಗಿ ಹೇಳುತಲಿದೆ ನಮ್ಮಯ ಮೂರ್ಖತನವ ... ಎಚ್ಛೆತ್ತುಕೊಳ್ಳುವ ಸಮಯ ಇದಾಗಿದೆ, ಪ್ರಕೃತಿಯ ಉತ್ತರ ಸ್ಪಷ್ಟವಾಗಿದೆ....
ಮಾನವ👦 ನಿಲ್ಲಿಸು ನಿನ್ನಯ ಮೂರ್ಖತನವ , ರಕ್ಷಿಸು ನಿನ್ನಯ ಪರಿಸರವ , ವಿಳಂಬ ಮಾಡದಿರು ಸರಿಪಡಿಸಲು,
ಎಚ್ಚೆತ್ತುಕೊ ಇನ್ನಾದರೂ , ತ್ಯಜಿಸು  ನಿನ್ನಯ ಅಹಂಕಾರವ ...!!!!!      - ದೇವಯ್ಯ


ಅಂತರಾಳದ 💗 ಮಾತು ಬಿಚ್ಚಿಡುವ 📢 (ಮನದಾಳದ ಮಾತನಾಡುವ ) ಆಸೆ  , ತಿಳಿಯುತಲಿಲ್ಲ ವಿವರಿಸುವ ವಿಧಾನ . ನಾನಲ್ಲೇ ಏನೋ ಒಂದು ಗೊಂದಲ😑 , ಹಿಂಜರಿಕೆಯೇ 😟 ಅಥವಾ ಭಯವೇ  ಅರಿಯದಾಗಿದೆ .
ನನ್ನ ಹಾದಿ ಸರಿಯೇ , ಏನೋ ಒಂದು ತಳವಳ . ಭಾವನೆಗಳನ್ನು ಬರವಣಿಗೆಯಲ್ಲಿ 📝 ತರುವ ಪ್ರಯತ್ನ ಮಾಡಲು ಪದಗಳು ಬರಡಾಗಿದೆ (ಬಾರದಾಗಿದೆ). ನನದೆಲ್ಲಾ ನನ್ನದೇ ಎನ್ನುವ ಪ್ರಶ್ನೆ ❔ ಮೂಡಿದೆ.
ನನ್ನ ನಿರೀಕ್ಷೆಗಳು ಹೆಚ್ಚೇ ಅಥವಾ ನನ್ನಲ್ಲಿ ಬೇರೆಯವರ ನಿರೀಕ್ಷೆಗಳಲ್ಲೇ  ಹೆಚ್ಚೇ ಎನ್ನುವ ಗೊಂದಲ ಶುರುವಾಗಿದೆ .
ಸಂಘರ್ಷದ ಪಯಣದಲ್ಲಿ 🚗 ಗುರಿಯ  ಹತ್ತಿರ ಹೆಜ್ಜೆ ಇಟ್ಟಾಗಿದೆ 🏃, (ಹಿಂದಿರುಗುವ ಮಾತು ಇಲ್ಲದಾಗಿದೆ ) ಹಿಂದಿರುಗಿ ಬರುವ ಹಿಚ್ಚೆ(ದಾರಿ) ಮರೆಯಾಗಿದೆ . ಉಳಿದಿರುವ  ಉತ್ತರ ಗೆಲುವೊಂದೇ 🏁🎆 ...... - ದೇವಯ್ಯ

ಕೆಲವೊಮ್ಮೆ ಅಂತರ್ಮುಖಿಯರು( Face to face) ತಮ್ಮ ಅಭಿಪ್ರಾಯಗಳನ್ನು ಸಮರ್ಥವಾಗಿ ಅಭಿವ್ಯಕ್ತಿಸುವ ಸಾಮರ್ಥ್ಯವುಳ್ಳ ಅತಿದೊಡ್ಡ ಬಹಿರ್ಮುಖಿ ( Outward) ಇವರ ಅಂತರಾಳವನ್ನು ಅನ್ವೇಷಣೆ ( Pursuit) ಮಾಡಿ ನೋಡಿದಾಗ ಬಹಿರ್ಮುಖಿಯರಿಗಿಂತ ( Than the outsiders) ಬಲವಾಗಿ ತಮ್ಮ ವಾದ ಮಂಡಿಸಬಲ್ಲರು ಎಂಬ ವಿಷಯ khachithavaaguthade ಖಚಿತವಾಗುತ್ತದೆ * .... ಸಹಾನಾ (ಸಿಎಸ್ಕೆ)


ಪ್ರೀತಿಯಿಂದ ಜೀವನ ಜೀವನದಲ್ಲಿ ಎಲ್ಲದರ ಆಸೆ ತೊರೆದು ಸಾವಿಗೆ ಸಮೀಪಿಸಿದಾಗ, ಸೋತ ಬದುಕಿದೆ ಆಶಾಕಿರಣವಾಗಿ ಬಂದೆ ನೀನು👧. ನನ್ನ👦 ಎಲ್ಲ ಹೆಜ್ಜೆಗಳಿಗೂ🐾 ಬೆನ್ನೆಲುಬಾಗಿ ನಿಂತೆ ನೀನು. ಆಶಾಕಿರಣವಾದ🌅 ನೀನು ಜೀವನದಲ್ಲಿ ತೋರಿಸಿದೆ ಯಶಸ್ಸಿನ ಹಾದಿಯನ್ನು. ಯಶಸ್ಸಿನ ದಾರಿಗೆ ಹೋದರೂ, ಮರೆಯಲಿಲ್ಲ ಎಂದಿಗೂ ನಿನ್ನ ನಾನು. ಜೀವನದ ಕಾಣದ ಕಡಲಿಗೆ ಮನ ಹಂಬಲಿಸಿದಾಗ, ಕಡಲಿನ🌊 ದಾರಿಗೆ ಕಣ್ಣಾಗಿ ನಿಂತೇ ನೀನು. ಹೆಜ್ಜೆಹೆಜ್ಜೆಗೂ ನೋವು ಆವರಿಸಿದಾಗ, ಸಂತೋಷದ ಚಿಲುಮೆಯಾಗಿ ನಿಂತೇ ನೀನು, ನಾ ಕಂಡ ಕನಸ್ಸಿಗೆ ದಾರಿ ದೀಪವಾಗಿ ನಿಂತೆ ನೀನು, ನನ್ನ ಪ್ರತಿ ಹೃದಯದ 💓 ಬಡಿತಕ್ಕೆ ಉಸಿರಾಗಿ ನಿಂತವಳು ನೀನು. ಈ ಉಸಿರಿಗೆ ಉಸಿರಾಗಿ ಬೆರೆತವಳು ನೀನು ಜೀವನದಲ್ಲಿ ಜೀವನದ ಅರ್ಥವನ್ನು ಈ ಜೀವಕ್ಕೆ ತೋರಿಸಿದ ಜೀವದ ಗೆಳತಿ ನೀನು, ಅದೇಕೆ ದೂರವಾದೆ? ನೀ ದೂರವಾಗಲು ನಾ ಮಾಡಿದ ತಪ್ಪಾದರೂ ಏನು?. ನಿನ್ನ ಎಲ್ಲ ಆಸೆಗಳಿಗೆ ಜೀವ ತುಂಬಿದ್ದೇ ತಪ್ಪಾಯಿತೆ? ನಿನ್ನ ನಾನು ಹೃದಯದಲ್ಲಿಟ್ಟು ಪೂಜಿಸಿದ್ದೆ ತಪ್ಪೇ? ಪ್ರೀತಿ ಏನೆಂದು ಅರಿಯ ದೇ, ಬಾವಿಯಲ್ಲಿದ್ದ ಕಪ್ಪೆ🐸 ನಾನು, ಅದೇಕೆ ಪ್ರೀತಿಯಾ ಸಮುದ್ರ ತೋರಿಸಿ ಅದರಲ್ಲಿ ಎಸೆದು ಹೋದೆ? ಜೀವನದಲ್ಲಿ ಎಲ್ಲವನ್ನು ಕಲಿಸಿದ ನೀನು, ಅದೇಕೆ ನಿನ್ನ ಬಿಟ್ಟು ಬದುಕುವುದು ಹೇಗೆ ಎಂದು ಕಲಿಸಲಿಲ್ಲ ನೀನು, ಓ ಜೀವದ ಗೆಳತಿ... ಒಮ್ಮೆಯಾದರೂ ಬಂದು ಹೇಳಿಕೊಡು, ನಿನ್ನ ಬಿಟ್ಟು ಬದುಕುವುದು ಹೇಗೆಂದು. ನಿನಗಾಗಿ ನಾ ಕಾದಿರುವೆ ಅದೇ ಪ್ರೀತಿಯಾ ಹಂಬಲಿಸುವ ಮನವಾಗಿ…       - ಸಂಗಮೇಶ್ 

ಪ್ರೀತಿಯಿಂದ💗 ಜೀವನ ಇಂದು ಜೀವನದಲ್ಲಿ ನಾನು ಏನೋ ಕಳೆದುಕೊಂಡಿರುವ ಅನುಭವ, ಜೀವನದಲ್ಲಿ ಏನು ಇಲ್ಲಾ, ಬಯಸಿದ್ದು ಯಾವುದು ಸಿಗ್ತಿಲ್ಲಾ, ನಾನು ತುಂಬಾ ದುರಾದೃಷ್ಟವಂತ, ನನಗೆ ಈ ಜೀವನವೇ ಬೇಡಾ ಎಂದು ಏನೆಲ್ಲಾ ಯೋಚನೆಗಳು💭. ನಾನು ಬಯಸಿದ ಕೆಲಸ ಸಿಕ್ಕಿಲ್ಲ, ಬಯಸಿದ ಯಾವ ವಸ್ತುಗಳು ಕೊಳ್ಳಲು ಆಗುತ್ತಿಲ್ಲ, ಬಯಸಿದ ವ್ಯಕ್ತಿಯು ಜೊತೆಗೆ ಇರುತ್ತಿಲ್ಲ, ಏನಾಗುತ್ತಿದೆ ಈ ನನ್ನ ಜೀವನದಲ್ಲಿ?? ಪ್ರೀತಿಸಿದ ಜೀವದ ಗೆಳತಿ👧 ದೂರ ಹೋದಳು, ಅವಳು ದೂರವಾದ ಮೇಲೆ ಮನಸ್ಸು ಭಾರವಾಗಿದೆ, ಹೃದಯ ತುಂಬಿದೆ, ಕಣ್ಣು 👀 ಒದ್ದೆಯಾಗಿದೆ, ಜೀವನ ಸಾಕಾಗಿದೆ. ಎಲ್ಲಿ ನೋಡಿದರು, ಯಾವ ಕಡೆ ತಿರುಗಿದರು ನಿನ್ನ ಜೊತೆ ಕಳೆದ ಆ ಮಧುರ ಕ್ಷಣಗಳು 🕘 ಮತ್ತೆ ಮತ್ತೆ ನನ್ನನ್ನು ಕೊಲ್ಲುತ್ತಿವೆ. ನಾ ನಿನ್ನ ಜೊತೆ ಕಳೆದ ಆ ಕ್ಷಣಗಳನ್ನು ಹೇಗೆ ಮರೆಯಲಿ, ಒಂದಾ ಎರಡಾ ಬರೋಬ್ಬರಿ ೮ ವರ್ಷದ ಪ್ರೀತಿ, ಅದು ಹೇಗೆ ಮರೆಯಲಿ ನಿನ್ನ💑 ನಾನು. ಈ ಕಳೆದ ೮ ವರ್ಷದಲ್ಲಿ ನಿನ್ನ ನೆನೆಸದ ಕ್ಷಣವಿಲ್ಲ, ನಿನ್ನ ಜಪಿಸದ ಸಮಯವಿಲ್ಲ. ನೀನು ನನ್ನಿಂದ ದೂರ ಹೋಗುವ ಮುನ್ನ ಹೇಳಿದ ಆ ಮಾತು "ನಿನಗೆ ನನಗಿಂತ ಒಳ್ಳೆಯ ಹುಡುಗಿ ಸಿಗುತ್ತಾಳೆ" ಎಂದು ಇನ್ನು ಕಿವಿಯಲ್ಲಿ👂 ಪ್ರತಿಧ್ವನಿಸುತ್ತಿದೆ. ನೀನು ಅದ್ಯಾಕೆ ಈ ಮಾತು ಹೇಳಿದೆ ನಾನು ಯಾವತ್ತಾದರೂ ನನಗೆ ನಿನಗಿಂತ ಒಳ್ಳೆಯ ಹುಡುಗಿ ಬೇಕು ಎಂದು ಕೇಳಿದ್ದೆನಾ?. ನೀನು ಎಲ್ಲಾ ಹುಡುಗಿಯರ ತರಹ ಮದುವೆ ವಿಷಯದಲ್ಲಿ ಪ್ರೀತಿಗೆ ಮೋಸ ಮಾಡಿ ಜೀವನವನ್ನು(ದುಡ್ಡು, ಐಶ್ವರ್ಯ, ಅಂತಸ್ತು, ಸಾಮಾಜಿಕ ಬೆಲೆ) ಆರಿಸಿಕೊಳ್ಳುವೆ ಎಂದುಕೊಂಡಿರಲಿಲ್ಲ. ಇವತ್ತಿಗೂ ಸುಮ್ಮನೆ ಇರುವ ನಾನು, ಇಂದು ಒಂದು ಮಾತು ಹೇಳುವೆ ಕೇಳು ಓ ನನ್ನ ಹೃದಯಾಗಾತಿ "ಜೀವನದಲ್ಲಿ ಎಲ್ಲರಿಗು ಪ್ರೀತಿ ಸಿಗುವದಿಲ್ಲ, ಆದರೆ ಪ್ರೀತಿಯಿಂದ ಜೀವನ ಗೆಲ್ಲಬಹುದು" . ಇಂದು ಒಂದು ನಿರ್ಧಾರಕ್ಕೆ ಬಂದಿರುವೆ, ಇಷ್ಟು ದಿನ ಈ ಮೋಸದ ಪ್ರೀತಿಯ💏 ಬಲೆಗೆ ಬಿದ್ದು ಜೀವನದಲ್ಲಿ ನಾನು ಸೋತಿರುವೆ. ನೀನು ಯಾವ ಸುಖದ, ಐಶ್ವರ್ಯದ ಜೀವನ ನನ್ನ ಹತ್ತಿರ ಇಲ್ಲ ಎಂದು ದೂರವಾದೆಯೋ, ಇಂದು ನಾನು ಅದೇ ಜೀವನವನ್ನು ಪ್ರೀತಿಯಿಂದ ಗೆದ್ದು ನಿಂತಿರುವೆ. ಪ್ರಪಂಚ🌏 ತುಂಬಾ ಚಿಕ್ಕದು, ಯಾವತ್ತಾದರೂ ಒಂದು ದಿನ ನಾವಿಬ್ಬರು ಅನೀರೀಕ್ಷಿತ ಭೇಟಿಯಾಗುವೆವು, ಅಂದು ನಿನ್ನ ಮನಸ್ಸಿಗೆ ಅರಿವಾಗುವದು ನೀ ಮಾಡಿದ ತಪ್ಪೇನು ಎಂದು? ಆದರೆ ಸಮಯ ಮಿಂಚಿ ಹೋಗಿದೆ, ಜೀವನ ತುಂಬಾ ಮುಂದೆ ಸಾಗಿದೆ, ಈಗ ಯಾವ ಪಶ್ಚತಾಪಕ್ಕೂ ಬೆಲೆ ಇಲ್ಲ. ನೀ ಹೇಳಿದ ಹಾಗೆ ನನ್ನ ಜೀವನದಲ್ಲಿ ನಿನಗಿಂತ ಹೃದಯವಂತೆ ಬಂದಿರುವಳು, ನೀ ಅಂದು ಹೇಳಿದ್ದೆ "ನಾ ನಿನ್ನ ಉಸಿರು, ನಿನ್ನ ಬಿಟ್ಟು ನಾ ಬದುಕಲಾರೆ, ನೀನಿಲ್ಲದೆ ನನಗೆ ಜೀವನ ಇಲ್ಲ ಏನೆಲ್ಲಾ ಎಂದು", ಆದರೆ ನೀನು ಹೇಳಿದ್ದು ಬರಿ ಮಾತು, ಇಂದು ನನ್ನ ಜೊತೆ ಇರುವ ಹೃದಯ ಈ ನಿನ್ನ ಮಾತುಗಳನ್ನೂ ಅನುಭವಿಸುವ ಅವಕಾಶ ಮಾಡಿದೆ. ನಾನು ಈ ಹೃದಯಕ್ಕೆ ಯಾವತ್ತೂ ಉಸಿರಾಗಿರುವೆ, ನಿನಗೆ ಧನ್ಯವಾದಗಳು ಯಾಕೆಂದರೆ ನಿನ್ನಿಂದಲೇ ನನಗೆ ಇವತ್ತು ಜೀವನ ಅರ್ಥ ಆಗಿದೆ, ಜೀವಕ್ಕೆ ಜೀವವಾಗಿರುವ 💕 ಹೃದಯ ಸಿಕ್ಕಿದೆ, ಇನ್ನು ಏನೆಲ್ಲಾ ಬದಲಾವಣೆ ಆಗಿದೆ. 
ಧನ್ಯವಾದಗಳು        - ಸಂಗಮೇಶ್ 


ಯಾರ ಹೊಟ್ಟೆಯ ಪಾಲೋ , ತಿಳ್ದವರಾರು....
ಓ ಮೇಕೆ 🐐 ,ಕುರಿಯೇ ನಿನ್ನ ನಾಳೆಯ ಚಿಂತೆ ಇಲ್ಲದೆ ತಿನ್ನುತಲಿರುವೆ, ಇನ್ಎರಡು ದಿನದಲ್ಲಿ ಬರಲಿದೆ ( ವಿಜಯದಶಮಿ ,ಮೊಹರಂ ಹೊಸತಡಕು) ಆಗಲಿರುವೆ  ಕಯ್ಮ ಉಂಡೆ 🍖, ಬಿರಿಯಾನಿಯ ಪಾಲು 🍛...   - ದೇವಯ್ಯ

ಕೊಟ್ಟಾಯ್ತು ಹೃದಯ 💓 , ನಿದ್ದೆ  💤 ಇಲ್ಲ ಬೆಳಗಾನ , ಸೇರುತಿಲ್ಲ ಅನ್ನ 🍚, ಅದಕೆ ತಿಂತಾ ಇದೀನಿ ಪಿಜ್ಜಾ 🍕 ಬರ್ಗರ್ ನ🍔 , ಗಂಟಲಲ್ಲಿ ಇಳಿಯುತ್ತಿಲ್ಲ ನೀರು , ಮಿಕ್ಸ್ ಮಾಡದೇ ಹೊಡಿತಿದಿನೀ ವಿಸ್ಕಿ , ರಮ್ಮು 🍸...!!! , ಮಿಸ್ ಮಾಡ್ಕೊಳ್ತಾ ಇದೀನಿ ಚಿಲ್ಲಿ ಚೀಕನು 🐔, ಸವಿ ಯಲು ಆಗುತಿಲ ಫಿಶು 🐠 ಮಟನ್ನು ......;)   - ದೇವಯ್ಯ

ಕನಸೇ 💭 ಹೇಗೆ ದೂರವಾಗಲಿ ನಿನ್ನಿಂದ , ನನ್ನ ಜೀವನ ಅಡಗಿಹುದು ನಿನ್ನಲ್ಲೇ . ನನ್ನದಾಗಿಸುವ ಹಂಬಲ ನಿನ್ನನು , ಕನಸೇ ನಿಜವಾಗಿಸುವೆ ನಿನ್ನನು .ಬರುತಿರುವೆನು 🏃 ದಿನವೂ ನಿನ್ನಯ ಸನಿಹ, ಕೊಡುವೆ ಆಕಾರವ 💠 ನನ್ನಯ ಬಾಳಲಿ .ಕನಸಿನ ಅರಮನೆ ಇಂದ ಬರಮಾಡಿಕೊಳ್ಳುವೆ  ನಿನ್ನನು ನನ್ನಯ ಲೋಕಕ್ಕೆ ......  - ದೇವಯ್ಯ

ಅಂದು ಇಂದಿನ ನಡುವೆ ಇರುಹುದು ಜೀವನದ ಗುಟ್ಟು ..... 
ಗೆಳೆತನ ಮಾಸಿದೆ , ಪ್ರೀತಿ ಬಾಡಿದೆ , ಸುಂದರ ಸಮಯ ಕೆಳೆದುಹೋಗಿದೆ , ಜೀವನ ಶಯ್ಲಿ ಬದಲಾಗಿದೆ .
ಅಂದಿನ ನಾನು (ನಮ್ಮನು ) ಇಂದು ಹುಡುಕುವಂತಾಗಿದೆ .......!!
ನಮ್ಮ ಈ ಜೀವನ ಹುಡುಕಾಟದಲ್ಲಿ ಕಳೆದುಹೋಗುತಲಿದೆ .
ನಾನು ಅವನೆಂಬ ಬೇದ ಹೆಚ್ಚಾಗಿದೆ , ಹಣದ ಲೋಭ ಮನಬಂದಂತೆ ಆಡಿಸತೊಡಗಿದೆ ...
ಸಂಬಂಧಗಳು ದೂರವಾಗಿದೆ (ಬೇಡವಾಗಿದೆ)...
ಹಿಂದೆ ತಿರುಗಿ ನೋಡಿದರೆ ಉಳಿದಿರುಹುದು ಮದುರ ನೆನಪುಗಳೊಂದೇ ......     - ದೇವಯ್ಯ

ಓ ಮುದ್ದಾದ ಮೊಗದ ಸುಂದರಿಯೇ , ನಾ ನಿನಗಾಗಿ ಪ್ರೀತಿಂದ ಕಾದಿರುವೆ ..... 
ಕಾದು ಕಾದು  ನಾ ಜೇವನದಲ್ಲಿ ತುಂಬ ಸೋತಿರುವೆ , ಆದರೂ ನಿನಗಾಗಿ ಹೃದಯಬಿಚ್ಚಿ  ಕಾಯುತಿರುವೆ...
                                                                                                                        -  ಸಂಗಮೇಶ್

ಬದುಕೆಂಬ ಸಾಗರದಲ್ಲಿ ಚಿಂತೆ ಎಂಬ ಧೋನಿ ಅನ್ನು ಸಾಗಿಸುವುದೋ ? ಮುಳುಗಿಸುವುದೋ ? ಎಂಬ ಪ್ರಶ್ನೆಗೇ ಉತ್ತರ ಹುಡುಕುವ ಪಯಣದಲ್ಲಿ ಸಾಗುತಿರುವೆನು ನಾನು !!..... ;)ನಿಧಿ. ಕೆ. ಹೆಚ್ 

ನಾ ನೋಡುವ ಹೆಣ್ಣಿನ ಮುಖ ಮುದ್ದಾಗಿರಲಿ
ಆ ಮುದ್ದಾದ ಮೋಗವು ಕಾಣಲು ಮುಗ್ದವಾಗಿರಲಿ
ಮುಗ್ದವಾದ ಮುಖದಲ್ಲಿ ಯಾವತ್ತು ಮಾಸದ ನಗುವಿರಲಿ
ಆ ನಗುವಿನಲಿ ಎಲ್ಲಾ ನೋವನ್ನು ಮರೆಸುವ ಸಾಮರ್ಥ್ಯವಿರಲಿ
                                                                       -  ಸಂಗಮೇಶ್


ಸಮುದ್ರದಲ್ಲಿ 🌊 ಸಾವಿರಾರು ಮೀನು 🐠, ನನ್ನ ಹಾರ್ಟ್ 💗 ಅಲ್ಲಿ ಇರೋದು ಒಂದೇ ಮೀನು 🐟 ಅದು ನೀನು👧.......
ಇಂತಿ ನಾನು, ಹೇಗಿದೆ ನನ್ನ ಲೈನು ..ಸೇರಿಸುವೆ ಇನ್ನು ಹಲವಾರು ಲೈನು , ಮಾರ್ಕ್ ಮಾಡ್ಕೊಳ್ಳಿ ದೇವು ನನ್ನ ನೇಮು 😊 


ದೋಣಿಯಲ್ಲಿ⛵ ಕೂತು ಹುಡುಕಿದೆ ನಾವಿಕನನ್ನು ,ದೋಣಿಯಲ್ಲಿ ಕೂತು ಹುಡುಕಿದೆ ನಾವಿಕನನ್ನು , 
ಕೆಲ ಕಾಲ ಮರೆತೇ ನನ್ನನೆ , ನನ್ನ ದೋಣಿಯ⛵ ನಾವಿಕ ನಾನೆಂಬುದನೇ ......
ಇರುವುದು ನೂರಾರು ದೋಣಿಗಳು🚢 ಸುತ ಮುತ್ತ , ಸಾಗಿಹುದು  ಅವರವರ ಪಯಣಧತಾ 🏃.....
ಹಿಂಬಾಲಿಸದಿರು ಬೇರೆ ದೋಣಿಯ , ರೂಪಿಸು ನಿನ್ನ ಪಯಣದ ದಾರಿಯ 🚣 .....
ಬಿಸಲು🌞 , ಗಾಳಿ , ಮಳೆ , ಹಗಲು  ರಾತ್ರಿ 🌗, ಸುಖ ದುಃಖ್ಖ , ಎಲವೂ ಇರುವುದು ಅವರವರ ಪಯಣದಲ್ಲಿ . ಚಿಂತಿಸಿ 💭 ಫಲವಿಲ್ಲ , ಅನುಭವಿಸುತ ಸಾಗು ನಿನ್ನಯ 👦 ಪಯಣವ...!!     - ದೇವಯ್ಯ

ಹೂ🌹 ಕೊಟ್ಟ ಹುಡುಗ , ಕೈ👋 ಕೊಟ್ಲು ಹುಡುಗಿ....
ಹುಡುಗ ಬಾರಿನ🍺 ಕಡೆಗೆ , ಹುಡುಗಿ ಹಸೆಮಣೆಗೆ 👰......
ಹುಡುಗಿ ಜೊತೆಗೆ ಇದ್ರೆ ಕಾಮನ ಬಿಲ್ಲು🌈 , ಹುಡುಗಿ ದೂರ ಇದ್ರೆ ಫೋನ್📞 ಬಿಲ್ಲು...
ಹುಡುಗಿ ಜೊತೆಗೆ ಇದ್ರೆ ಕಾಮನ ಬಿಲ್ಲು , ಹುಡುಗಿ ದೂರ ಇದ್ರೆ ಫೋನ್ ಬಿಲ್ಲು ಅದೇ ಹುಡುಗಿ ದೂರ ಹೋದರೆ ಬಿಲ್ಲು ಬಾರ್ 🍸ಬಿಲ್ಲು.....

ಮೊರೆ ಹೋಗು ಪ್ರಕೃತಿಯ🌳 ಮಡಿಲಿಗೆ , ಹಿತ ನೀಡುಹುದು ನಿನ್ನ ಮನಸಿಗೆ 💚 ಹಗುರಾಗುವುದು ಹೃದಯ💗 ..
ಹಕ್ಕಿಯ🐦 ಚಿಲಿಪಿಲಿ , ನದಿಯ🌊 ಜುಲ್ಲು ಜುಲ್ಲು , ಹಸಿರಿನ ಸೊಬಗು , ಹೂವಿನ🌷 ಕಂಪು ಗಾಳಿಯ ತಂಪು ಮರೆಸುಹುದು ನಿನ್ನ ಚಿಂತೆಯ  , ಹಿಳಿಸುಹುದು ಮನಸಿನ ಬಾರವ 💜 ..... - ದೇವಯ್ಯ


ಹೂ ಅಂತ ಹೃದಯವನ್ನು ಹಿಂಡುವಿರೇಕೆ? ಹಾಲಂಥ ಮನವ ಕಲಕುವಿರೇಕೆ, ಜೇನಂಥ ಪ್ರೀತಿಯ ಮರೆಯುವಿರೇಕೆ? ಸಿಹಿಯಾದ ಸ್ನೇಹವ ದೂರ ಮಾಡುವಿರೇಕೆ....? - ದೇವಯ್ಯ

ಚಿಕ್ಕವರಿದ್ದಾಗ ನಗೋದಕ್ಕಿಂತ ಆಳೋದೆ😭 ಹೆಚ್ಚು ಆದರೆ ಹೊಳಗೆ ತುಂಬಾ ಖುಷಿ ಇರುತ್ತೆ ...ಈಗ ಆಳೋದಕ್ಕಿಂತ ನಗೋದೇ😄 ಹೆಚ್ಚು ಆದರೆ ಹೊಳಗೆ ತುಂಬಾ ನೋವಿರುತ್ತೆ ....;)   - ದೇವಯ್ಯ


ದಿನವೂ ಕಳೆಯದೆ ಇರಲ್ಲಿ ರಾತ್ರಿ ಬರದೇ ಇರಲ್ಲಿ ನಮ್ಮಿಬರ ಈ ಸ್ನೇಹ ಎಂದು ಕೊನೆ ಯಾಗದೆ ಇರಲ್ಲಿ ;)  - ದೇವಯ್ಯ

ನೋಡಿದ್ದೂ ಸುಳ್ಳಾಗ ಬಹುದು....
ಕೇಳಿದ್ದೂ ಸುಳ್ಳಾಗ ಬಹುದು..... ಸುಳ್ಳಾಗ ಬಹುದು.....
ನಿಧಾನಿಸಿ ಯೋಚಿಸಿದಾಗ , ನಿಜವೂ ತಿಳಿವುದು !!
ಊರಲ್ಲಿ ಒಂದು ನಾಡು ಇತ್ತು , ಆ ನಾಡ ಒಡತಿ ಜಯಮ್ಮ ..... ಮುಂದೇನಾಯಿತು ಕೇಲಮ್ಮ .
ಇವರೆಲ್ಲ  ನಡುವೆ ಇದ್ದವೆರಲ್ಲ  ಗುಮ್ಮಗಲಮ್ಮ , ಒಡತಿಯ ಮಲಗಿಸೋ ಪರ್ಯತ್ನ ಮಾಡಿದ್ರಮ..!! 
ಅವಳೇ ಬೆಳಿಸಿದ ಹೆಣ್ಣು, ಒಡತಿಯ ಬಾಯಿಗೆ ಬಿಟ್ಟಳು ಮಣ್ಣು ಮಣ್ಣು......... ( - ಹರೀಶ್ - ದೇವಯ್ಯ)

ಮನಸು ಖಾಲಿ ಎನಿಸಿದಾಗ ನೆನಪು ತುಂಬಿಕೊಳ್ಳುತದೆ , ಹೃದಯ  ಖಾಲಿ ಎನಿಸಿದಾಗ ಕಣ್ಣು ತುಂಬಿಕೊಳ್ಳುತದೆ 
ಓ ಮನಸೇ ರಿಲಾಕ್ಸ್ ,
ಹಾಗೆ ಕೆಲಸ ಇಲ್ಲದೆ ಹೋದಾಗ ಇವೆಲ್ಲ ನೆನಪಿಗೆ ಬರುತ್ತೆ.
ತೋರದಿರು ನಿನ್ನ ದುಃಖವ, ನಿನ್ನೆಯಾ ನೆನೆದು ಕೊಲ್ಲದಿರು ಈ ದಿನವ....ಇರಲ್ಲಿ(ಮೂಡಿಸು ) ನಗು ನೀ ಹೊದಲ್ಲೆಲ.....
ಇದರ ನಡುವೆ ಮರೆಯದಿರು ನಿನ್ನ ಗುರಿ , ಜೀವಿಸು ಮರೆತು ನಿನ್ನ ಕಹಿದಿನವ.
ಮುಂದ್ಹೊಂದು ದಿನ ಗೆಲುವು ನಿನ್ನದು.....  - ದೇವಯ್ಯ


ನೀ ಏನೇ ಹೇಳಿದರು ನನಗಿಲ ಚಿಂತೆ ,
ನೀ ಏನೇ ಹೇಳಿದರು ನನಗಿಲ ಚಿಂತೆ , ಅದರಿಂದ ಕಡಿಮೆ ಹಾಗುವುದೇ ನನ್ನ ಘನತೆ......
                                                                                                            - ದೇವಯ್ಯ
ನಿನ್ನ ಮೌನದಿಂದ ನಾ ಮುಕನಾಗಿರುವೆ , ಕಾಡುತಿದೆ ನೆನಪುಗಳು ಆ ಸವಿ ದಿನಗಳು ,
ಹಂಬಲಿಸಿದೆ ಮನವು ಆ ದಿನಗಳನ್ನು .
ಬಾರೆ ನೀನು ನನೊಡನೆ ಕಾಯುತಿರುವೆ ಪ್ರತಿಕ್ಷಣವೂ ನಿನಗಾಗಿ .
ಹೀಗೆ ಬಂದು ಹಾಗೆ ಹೋಗದಿರು ಇರಲ್ಲಿ ನನ್ನ ಪಯಣ ನಿನೊಡನೆ ಎಂದೆಂದೂ .... 
ನೀನಿಲ್ಲದೆ ಹಾಗಿದೆ ನೋವು ಅಪಾರ , ಮುಗಿಸದಿರು ಈ ಪಯಣ  ಇಷ್ಟು ಬೇಗ .!
ಗೆಳತಿ ಪೋಷಿಸುವೆ ನಿನ್ನ ನನ್ನ ಹೃದಯದ ಮನೆಯಲ್ಲಿ , ಹರಿಸುವೆ ಸಂತೋಷದ( ಪ್ರೀತಿಯ ) ಮಳೆಯ 
ನೋಡಿಕೊಳ್ಳುವೆ ನಿನ್ನ ಮಗುವಿನಂತೆ ,ಬಾರದು ನಿನಗೆ ಎಂದು ನೀನವರ ನೆನಪು ಇರಲ್ಲು ನನ್ನ ಜೊತೆ(ನನೊಂದಿಗೆ )...... 
- ದೇವಯ್ಯ

ಹುಡುಕಿದರೆ ಸಿಗುವುದು ಮೀನಿನ ಹೆಜ್ಜೆ ,
ಪ್ರಯತ್ನಿಸದಿರು ತಿಳಿಯಲು ಹುಡುಗಿಯ ಮನಸು .....
ಬಿಡು ಅವಳೇ ಬೇಕೆಂಬ ಹಠವ , ಬಂಧಿಸದಿರು ನಿನ್ನ ಪ್ರೇಮವ .
ನಡೆ ನಿನ್ನ ಗುರಿಯ ಕಡೆಗೆ ನೀನು ಬಯಸಿದ್ದು ಬರುವುದು ನಿನ್ನೆಡೆಗೆ ...
ಇರಲಿ ತಾಳ್ಮೆ , ಮರೆ ನಿನ್ನ ಈ ಗಳಿಗೆಯ .
- ದೇವಯ್ಯ

ಗುಲಾಬಿ ಗಿಡದಲ್ಲಿ ಎಷ್ಟೇ ಮುಳ್ಳು ಇದ್ದರು ಹೂವು ಅರಳಲೇ ಬೇಕು , ಹಾಗೆಯೇ ಮನಸಿನಲ್ಲಿ ಎಷ್ಟೇ ನೋವಿದ್ದರೂ ಮುಖದಲ್ಲಿ

ನಗು ಇರಲೇ ಬೇಕು......
 - ದೇವಯ್ಯ


ದಿನವ ಕಳೆಯುತಲಿರುವ ಅವಳ ನೆನಪಿನಲಿ,

ಪ್ರತಿ ಕ್ಷಣವು ಉಸಿರಾಡುತಲಿರುವೆ ಅವಳ ಹಸರಿನಲಿ...

ಕಾರಣ‌ ತಿಳಿಯದು ಅವಳ ಮೌನಕೆ, ಕಣ್ಣೀರಿಡುತಿರುವೆ ನನಗೆ ತಿಳಿಯದೆ!

ಹುಡುಕುತಲಿರುವೆ ಕಾರಣ ಅವಳ ಮುನಿಸಿಗೆ, ಗಳತಿ ಕಾಯುತಿರುವೆ ನಿನ್ನ ಉತ್ತರಕೆ.

ಈಗ ನಿನ್ನ ಸಹಾಯ ಒಂದೆ ಉಳಿದಿರುವ ದಾರಿ ನನಗೆ.
                                                           - ದೇವಯ್ಯ

ನಾಳೆಗಾಗಿ ಕೊಲ್ಲದಿರು ಈ ದಿನವ..
ಜೀವಿಸು ಇಂದು ಮರೆತು ನಾಳೆಯನು.
ನಾಳೆಗಾಗಿ ಕೊಲ್ಲದಿರು ಈ ದಿನವ
ಜೀವಿಸು ಇಂದು ಮರೆತು ನಾಳೆಯನು ಶಾಂತಿ ತುಂಬಿರಲ್ಲಿ ನಿನ್ನ ಮನದಲ್ಲಿ ಇಂದು, ಇರಲ್ಲಿ ನಗು ನಿನ್ವೊಡನೆ ಎಂದೆಂದೂ .
ಇರಲ್ಲಿ ನಾಳೆಯ ನಂಬಿಕ್ಕೆ ಸದಾ ನಿನ್ವೊಡನೆ, ಜೀವಿಸು ಮರೆತು ನಿನ್ನ ಕಹಿದಿನವ
ಮುಂದ್ಹೊಂದು ದಿನ ಸಿಗುಹುದು ಗೆಲುವು ನಿನ್ನ ಪರಿಶರ್ಮಕ್ಕೆ .
ಕೈಗೆಟುಕುವುದು ನಿನ್ನ ಕನಸು ಒಂದಾಗಿ ಒಂದು ..
ಬರುವುದು ಹರುಷ ಬೆಂಬಿಡದೆ ನಿನನ್ನು ಎಂದೆಂದೂ .......!                                                                   
                                                                  - ದೇವಯ್ಯ

ಅಂತು ಇಂತು ಮಳೆ ಬಂತು , ಭೂಮಿಗೆ ತಂಪು ತಂತು ....
ಅಂತು ಇಂತು ನಮ್ಮೂರಿಗೆ ಮಳೆ ಬಂತು !, ಬೆಂದ ನಮಗೆ ಹರುಷ ತಂತು .
ಅಂತು ಇಂತು ಮಳೆ ಬಂತು...
ಮುದುಡಿದ ಗಿಡಗಳಿಗೆ ಜೀವ ತುಂಬಿತು, ಬತಿದ ಹೊಂಡಗಳು ಫುಲ್ ಆಯ್ತು .
ಅಂತು ಇಂತು ನಮ್ಮೂರಿಗೆ ಮಳೆ ಬಂತು , ಬೆಂದ ನಮಗೆ ಹರುಷ ತಂತು.
 - ದೇವಯ್ಯ

   
ಮುಳ್ಳು ಇಲ್ಲದೆ ಗುಲಾಬಿ ಇಲ್ಲ..ನೋವಿಲ್ಲದೆ ಪ್ರೀತಿ ಇಲ್ಲ..
ಸೋಲ್ಲಿಲ್ಲದೆ ಗೆಲುವಿಲ್ಲ...ಕಷ್ಟವಿಲ್ಲದೆ ಏನೇನು( ಯಶಸ್ಸು )ಇಲ್ಲ..
ತ್ಯಾಗವಿಲ್ಲದ ಸಂಸಾರವಿಲ್ಲ...ಸ್ವಾರ್ಥವಿಲ್ಲದ ಸ್ನೇಹವಿಲ್ಲ...ಒಟ್ಟಾರೆ ನಕಾರಾತ್ಮಕವಿಲ್ಲದೆ( Negative)ಧನಾತ್ಮಕವಿಲ್ಲ … (positive)- ದೇವಯ್ಯ


ಸೋತರೆ  ಏನಂತೆ  ಇಂದು..  ಸೋತರೆ  ಏನಂತೆ ಇಂದು ಬಿಡದಿರು ನೀ ಪ್ರಯತ್ನವನು ಇರಲಿ ನಂಬಿಕೆ
  ಪರಿಶ್ರಮದೊಡನೆ, ಮುಂದೊಂದು ದಿನ ಇರುವುದು ಗೆಲುವು ನಿನ್ನೋಡನೆ ...!          
                                                                                            - ದೇವಯ್ಯ
  ಗೌರಿ( shankar) ತುಂಬ ಸೈಲೆಂಟ್ . 
     ಆಗ್ತಾನೆ ಅವಗ್ವಾಗ್ voilent 
     ಇವನು  ಯಾವಾಗಲು ಆಗಲ್ಲ ಹೈಲೈಟ್ ,
     ಬಟ್ ಇವನು ದೊಡ್ಡ tubelight .. 
                                      - ಸಂಗಮೇಶ್ 

  ಗೌರಿ ಗೆ barthide ತುಂಬಾ ಕೋಪ . 
     ಹಾಕ್ತಾನೆ ಗಿರೀಶ್ ನ ಮೇಲೆ ಹಿಡಿ ಶಾಪ 
     ತಡೆಯೋಕೆ ಆಗ್ತಿಲ್ಲ ಅವನು ಕೊಡೊ ತಾಪ 
     ಗೌರಿ ನ ನೋಡಿದ್ರೆ ನನ್ಗನ್ನಿಸ್ತಿದೆ ಅಯ್ಯೋ  ಪಾಪ ..!!
                                                        - ಸಂಗಮೇಶ್ 

 . ದೇವಯ್ಯ   ಬೆಳಿಗೆ  ಎದ್ದಮೇಲೆ ನೋಡ್ತಾನೆ  ರವಿ 
     ರವಿ ನೋಡ್ತಾ ನೋಡ್ತಾ ಆಗ್ತಿದಾನೆ  ದೊಡ್ಡ ಕವಿ 
     ಕವಿ ಅದಮೇಲೆ  anubhavsida ಸಾಹಿತ್ಯದ  ಸವಿ 
      ಸಾಹಿತ್ಯ  ಸವಿಯುತ  seridane  ಗವಿ ....
                                                               -  ಸಂಗಮೇಶ್ 

   ಜೀವನದಲ್ಲಿ  ಇರಬೇಕು ಗುರಿ 
     ಗುರಿ  ಇಲ್ಲದಿದರೆ  ನೀನಾಗ್ತಯಾ ಕುರಿ 
     ಕುರಿ ಆದ್ರೆ  ಏನು ಸಾಧನೆ  ಮಾಡೋಕಾಗಲ್ಲ  ಮರಿ 
      ಈಗಲಾದ್ರು ಹಿಡಿ ನೀನು ದಾರಿ ಸರಿ ........ 
                                                             - ಸಂಗಮೇಶ್
                                            
ಹೆಸರಲ್ಲಿ  ಏನ್ ಇದೆ , ಉಳಿದಿರುವುದು ನೆನಪುಗಳೊಂದೆ  
ಹೆಸರಲ್ಲಿ  ಏನ್ ಇದೆ , ಉಳಿದಿರುವುದು ನೆನಪುಗಳೊಂದೆ  
ಮಾಸದು  ಬಾಡದು ಈ  ನೆನಪುಗಳು , ಬಿಂಬದಂತೆ  ಇರುವುದು ಸದಾ ನಮ್ಮೊಡನೆ  ,
ತರುಹುದು ದುಃಖ ಸಂತೋಷಗಳ  ಆ  ಸವಿ  ಮದುರ  ಕ್ಷಣಗಳನು ನೆನೆದೊಡನೆ .... 
                                                                      - ದೇವಯ್ಯ

 ಪ್ರೀತಿಗೆ  ಬೆಲೆ ಈಲ್ಲ , ನೀತಿಗೆ  ಕೊನೇ ಈಲ್ಲ
ಹಾರುವ ಹಕ್ಕಿಗೆ ಹಾಂಕಾರ , ಓದಿರುವ  ಹುಡುಗಿಗೆ ದುರಂಕಾರ ...

 ಜೀವನ ಎಂಬ ಸಮುದ್ರದಲ್ಲಿ  ಸ್ನೇಹ ವೆಂಬ ಧೋಣಿ  ಏರಿ

ಪ್ರೀತಿ ಹುಡುಕುತ ಸಾಗಿರುವೆ ...:)
                                      - ದೇವಯ್ಯ

 HR ಅಮ್ಮನಿಗೆ ಬರಿ ಹೊಟ್ಟೆ  ಕಿಚ್ಹು

   HR ಅಮ್ಮನಿಗೆ ಬರಿ ಹೊಟ್ಟೆ  ಕಿಚ್ಹು
   ಮಾಡ್ತಾರೆ ಎಲ್ಲರ ಮೇಲೆ ಸಂಚು
ಇದನು  ಅರಿಯದೇ  ಹೋದರೆ ಇದೆ ಎಲ್ಲರಿಗೂ  ಪಂಚು ...
                                                         - ದೇವಯ್ಯ


 ನಮ್ಮ  ಸುತ್ತ ಇದ್ರೆ  ಕೆಲವು ಭಾರತೀಯ ನಾರಿ .

       ಅವ್ರು ಹುಟ್ಕೊತಾರೆ  ಫುಲ್ Exಪೊಸ್   ಮಾಡಿ ಸಾರಿ .
        Exಪೊsed  ಸಾರಿ ನೋಡಿ ತಪ್ಪುತಾರೆ ಹುಡುಗರು ದಾರಿ .
      ದಾರಿ ತಪ್ಪಿದರೆ ನಾರಿಯರು ತೆರಬೇಕಾಗುತ್ತೆ ಶೀಲದ ಮೂತ ಭಾರಿ !!
                                                                                         - ಸಂಗಮೇಶ್
  ರುದ್ರಿ ಇವನು ಬಲು ಛತ್ರಿ ... ರುದ್ರಿ ಇವನು ಬಲು ಛತ್ರಿ 
         ನೋಡ್ತಾ ನೋಡ್ತಾ ನೇ ಹಾಕ್ತಾನೆ ಕತ್ರಿ .... 
         ತಿನ್ತಾನೆ ತಿಂಡಿ ಮಂಕ್ರಿ ಮಂಕ್ರಿ 
          ಬಡವರ ಮದುವೆಗೆ ಹೋಗಿ ಮಾಡ್ತಾನೆ ಪಾತ್ರೆ Empty Empty...!!
                                                                                           - ದೇವಯ್ಯ
                                                                     
   ಹೃದಯದಲಿ ಇರುವುದು  ಹಲವಾರು ನೋವು
        ತಿನ್ನುತಿರುವುದು ಮನಸಿನ ನೆಮ್ಮದಿಯನು ಕಿತ್ತು ಕಿತ್ತು
       ಸಿಗುತ್ತಿಲ್ಲ ಯಾವುದು ಮುಲಾಮು ಸರಿಪಡಿಸಲು ಈ ರೊಗವನು... 
                                                                              - ದೇವಯ್ಯ
 ಹೃದಯ ನನ್ನದು ಹೃದಯದಲಿರುವ  ಸವಿ ನೆನಪು ನಿನ್ನದು
       ಜೊತೆಯಾಗಿ ಈಗ ಇಲ್ಲದಿದ್ದರೆ ಏನಂತೆ
        ಕೊನೆತನಕ "ನಿನ್ನ" ಸ್ನೇಹ, ಪ್ರೀತಿ ಉಳಿಸಿಕೊಲ್ಲೋ ಆಸೆ ನನ್ನದು.
       ಕೊನೆ ಉಸಿರುರಿರುವ  ತನಕ ಇರುವೆ ಸದಾ ನಾ ನಿನ್ನೊಡನೆ
                                                                              - ದೇವಯ್ಯ
       Permanent   ಅಲ್ಲದ  ಲೈಫ್ ನಲ್ಲಿ Permanent
       ಕನಸುಗಳು ಮತ್ತು ಆಸೆಗಳು,  ಅದರ ಹಿಂದೆ ಓಡಿ  ಓಡಿ ಮುಗಿಯುತಲಿದೆ  ನಮ್ಮ ಲೈಫ್ ನ ಡೇಸ್ ಗಳು ,       ಕೈಗೆ ಸಿಗುತಿಲ ನಮ್ಮ ಕನಸುಗಳು.
                                                                              - ದೇವಯ್ಯ
  ಸತ್ತ ಪ್ರೀತಿ ಗೆ ಕಾಯುತ ಕಾಯುತ ಹುರುಳಿದೆ ದಿನ,
         ಸತ್ತ ಪ್ರೀತಿ ಗೆ ಕಾಯುತ ಕಾಯುತ ಹುರುಳಿದೆ ದಿನ,
         ಮುಂದೇನು ಎನುವುದ ಯೋಚಿಸೋ ಮಂಕುತಿಮ್ಮ,
         ಸಮಯವೂ ಕಾಯದು ನಿನಗೆ ತಿಮ್ಮ.
                                                                            - ದೇವಯ್ಯ
  ಆಸೆಗಳು, ದೊಡ್ಡ ಆಸೆಗಳು.... 
 ಅದರ ಹುಡುಕಾಟದಲ್ಲಿ ಹುರುಳಿದೆ ದಿನಗಳು,ಬೆಂಬಿಡದಂತೆ ಕಾಡುತಿದೆ ಸೋಲಿನ ಕಹಿ ಘಟನೆಗಳು 
 ಇದರ  ನೆನಪಿನಲ್ಲಿ ಬರೆದಿರುವೆ E ಸಣ್ಣ  ಕವಿತೆ ಒಂದನು(ಕವಿತೆಯನ್ನು).       
                                                                                                                  - ದೇವಯ್ಯ

 ಎಲ್ಲರೊಡನೆ ನಾನು...  ಎಲ್ಲರೊಡನೆ ನಾನು... , ನನ್ನೊಡನೆ ಯಾರು!?

       ಇದನು ಅರಿಯಲು, ಉರುಳಿವೆ ವರ್ಷಗಳು, ಹುರುಳುತಿದೆ ವರ್ಷಗಳು ಸಿಗದೇ ಈ ಪ್ರಶ್ನೆಗೆ ಉತ್ತರಗಳು .
                                                                                                                             - ದೇವಯ್ಯ
 ಎಲ್ಲರೂ ಗಳಿಸಲು ನಿಂತಿದ್ದಾರೆ ಹಣ,
        ಹಣ ಗಳಿಸುವುದೊಂದೇ ಅವರ ಪಣ
       ಪಣ ತೊಟ್ಟರೆ ಹೊಡೆಯುವುದು ಮನದಲ್ಲಿ ಘಂಟೆ ಢಣ ಢಣ
      ಢಣ ಢಣ ಘಂಟೆ ಹೊಡೆದು ಮಣ್ಣಲ್ಲಿ ಮಣ್ಣಾಗುವುದೆ  ಈ ಮಾನವರ ಗುಣ.
                                                                                 - ಸಂಗಮೇಶ್ 

 ಜೀವನದಲ್ಲಿ ತೋರೆದಿದ್ದೆ ನಾನು ಎಲ್ಲದರ "ಹಂಗು"

       ಆವಾಗ ತಲೆಯಲ್ಲಿ ಸೇರಿದೆ ಪ್ರೀತಿಯ "ಗುಂಗು"
       ಪ್ರೀತಿ ಮಾಡಿದಾಗ ಬದಲಾಯಿತು ಜೀವನದ "ರಂಗು"
       ಇಷ್ಟೆಲ್ಲಾ ಹೇಳುತಿರುವವನು ನಾನ್ಯಾರು ಗೊತ್ತೆ....?
                                      ಅವನೇ Mr. ಸಂಗು
                                                 - ಸಂಗಮೇಶ್ 

ಬಾರದು ಎಂದೂ ನಿನ್ನ ಆ ಕಳೆದುಹೋದ ದಿನಗಳು,
ಅದನ್ನು ಕಾಯುತ್ತ ಕಳೆಯದಿರು ಈ ಮಧುರ ಕ್ಷಣವನ್ನು...
ಜೀವಿಸು ಈ ದಿನ ಮರೆತು ನಾಳೆಯನ್ನು.....

 - ದೇವಯ್ಯ




ಪ್ರೀತಿಯ ಊರೊಳಗೆ ದಾರಿ ಹುದಕ್ಕೂ ಹೂಗಳು....
ಹೂಗಳ ಸುತ್ತ ನೂರಾರು ಮುಳ್ಳುಗಳು!
ಹುಡುಕದಿರು ನಿನ್ನ ಹೂವಿಗೆ...ಇರುವುದೇಲ್ಲ ನಿನ್ನದೇ...
ಸವಿ ಹೂವಿನ ಸೌಂದರ್ಯ ಮರೆಯುತ ನಿನ್ನ ಆ ಕಹಿ ನೆನಪುಗಳನ್ನು.... ಸಾಗು ಅದರ ನಡುವೆ ನಿನ್ನ ಲಕ್ಷ್ಯದೇಡೆಗೆ...
 

 - ದೇವಯ್ಯ

ಇಂದಿಗೆ ನನ್ನ ಪ್ರೀತಿಯ ವನವಾಸ ಮುಗಿಯಿತು ಬರಮಾಡಿಕೊಳ್ಳಲು ಅಯೋಧ್ಯೆಯಲ್ಲಿ ಯಾರೂ ಇಲ್ಲ, . . . ಲಂಕೆಯ ರಾವಣನ ಜಯ... ಕಲಿಯುಗ...

-ಮದನ್ ಕುಮಾರ್ ಎಂ
ಬಿಳಿ ಹಾಲು
ಬಿಳಿ ಕಾಗದ ಬಿಳಿ ಮೋಡ ಬಿಳಿ ಹೂ ಅನ್ನ, ಮೊಟ್ಟೆ, ವೆನಿಲಾ . . . ಇದರ ಹುಚ್ಚು ಪ್ರೀತಿಗೆ ಪ್ರೇಯಸಿಯ ಹೆಸರು ...
-ಮದನ್ ಕುಮಾರ್ ಎಂ


ಜಲಜನಕವು ಆಮ್ಲಜನಕದೋಂದಿಗೆ ವರ್ತಿಸುತ್ತಿರುವಾಗ- ಅವನು ಅವಳ ಹೆಸರನ್ನು ನೀಲಿ ಹೃದಯದೊಂದಿಗೆ ಡೆಸ್ಕಿನಲ್ಲಿ ದಟ್ಟವಾಗಿ ಕೇತ್ತುತ್ತಿದ್ದ... ಮುಂದಿನ ಪೀರಿಯಡ್ ಅಭೀಜ್ಞಾನ ಶಾಕುಂತಲ... ಹುಡುಗನ ಪೆನ್ನಲ್ಲಿ ಹನಿ ಇಂಕಿಲ್ಲ... - ಜೋಶಿ




 










www.minchu.net
minchuservices.blogspot.com

Buy Arm Blaster and AMAZ Abs
http://minchu.net/

No comments:

Post a Comment